Thursday, May 10, 2012

ಪುಳಕಗಳ Someಶೋಧನೆ..

ಪ್ರತಿ ದಿನವೂ ನೀವು ಹೀಗೆ ಕಂಪ್ಯೂಟರ್ ಮುಂದೆ ಕುಳಿತು ಇಂತಹದೊಂದು ಪ್ರಶ್ನೆಯನ್ನೂ ಎದುರಿಸಿರುವುದಿಲ್ಲ:

ಎಲ್ಲಿಯೋ ತನ್ನದೇ ಆದ Creative ಜಗತ್ತಿನಲ್ಲಿ ಇದ್ದ ಹುಡುಗನೊಬ್ಬ, ಅವಳಿಗೋಸ್ಕರ ಎಲ್ಲವನ್ನೂ ಬಿಟ್ಟು, ಅಪರೂಪಕ್ಕೆ ಬೇಡದೆಯೇ ಹುಟ್ಟಿಕೊಂಡ Life ನ ಒಂದು ಜವಾಬ್ದಾರಿಯನ್ನೂ ಸಹ ಲೆಕ್ಕಿಸದೆಯೇ, ಅವಳಿದ್ದ ಕಡೆಗೆ ಬಂದು, ಕೊನೆಗೆ ಎಲ್ಲವನ್ನೂ ಕಳೆದುಕೊಂಡು Just ಆ 3 ವರ್ಷಗಳ ಖಾಸಗಿ ನೆನಪುಗಳನ್ನು ಒಟ್ಟಿಗೆ ಗುಡ್ಡೆ ಹಾಕಿಕೊಂಡು, ಭಾನುವಾರದ ಮುಂಜಾವಿನಂದು Laptop ನ ಸ್ಕ್ರೀನ್ ನೋಡುತ್ತಾ – ನನಗಿದು ಬೇಕಿತ್ತಾ!? ಎಂದು ತನ್ನನ್ನೇ ತಾನು ಪ್ರಶ್ನಿಸಿಕೊಳ್ಳುವುದು ಯಾರಿಗೂ ಬೇಡದ ಸಂಗತಿ ಬಿಡಿ

ಇಂತಹದೊಂದು ಪ್ರಶ್ನೆಯನ್ನು ಕೇವಲ ಪ್ರೀತಿಯಲ್ಲಿದ್ದು, ಅನುಭವಿಸಿ, ಕೊನೆಗೆ ಕಳೆದುಕೊಂಡವರು ಮಾತ್ರ ಪ್ರಶ್ನಿಸಿಕೊಳ್ಳಬಹುದು!.

Coffee Mug ಕಡೆಗೆ ಒಮ್ಮೆ ನೋಡಿದೆ. ಆ ಮುಂಜಾವಿನ ಚುಮು-ಚುಮು ಚಳಿಯೊಂದಿಗೆ Coffee ತನ್ನ ಬಿಸಿ-ಬಿಸಿ ಹಬೆಯೊಂದಿಗೆ ಚೆಲ್ಲಾಟದಲ್ಲಿ ಬ್ಯುಸಿ ಆಗಿತ್ತು, ಅದಕ್ಕೆ ಅನುರಾಗದ ಹಂಗಿಲ್ಲ! ಇಬ್ಬನಿಯ ಪಿಸುಮಾತಿಗೆ ಕಿವಿಯೊಡ್ಡಿ ಅದರ ಪ್ರೀತಿಗೆ ಕರಗಿ ತಣ್ಣಗಾಗುವ ಆ ಕೊನೆಯ ಕ್ಷಣದವರೆಗೂ ಅದು ಖುಷಿಯಲ್ಲೇ ತೇಲುತ್ತದೆ, Lucky ಫೆಲೋ!

ತುಂಬಾ ಅಂತರ್ಮುಖಿಯಾದೆ. ಯಾವ ಗೆಳೆಯನೊಂದಿಗೂ ಮಾತನಾಡುವ ಇರಾದೆ ಇರಲಿಲ್ಲ, ಕಾರಣವಿಲ್ಲದೆಯೇ ದಿನಕ್ಕೆ ನೂರಾರು ಬಾರಿ Touch ಮಾಡಿಸಿಕೊಳ್ಳುವ ಆ Mobile ಗೂ ಈ ದಿನ ನೆಮ್ಮದಿ. 

ಮತ್ತೊಮ್ಮೆ Laptop ನ Screen ನೋಡಿದೆ, ಕೈಗಳು ನನ್ನ ಮನಸ್ಸಿನ ಸಂವೆದನೆಗೂ ಕಾಯದೇ Google ಸೈಟ್ ಓಪನ್ ಮಾಡಿಯೇಬಿಡುತ್ತವೆ, ಖಿನ್ನತೆಯ ಮನಸ್ಸು ಇಂಟರನೆಟ್ ಗೆ Addict ಆಗಿಟ್ಟಿದೆ ಅನ್ನಿಸುತ್ತದೆ. ಟೈಪ್ ಮಾಡಲು ಅನುವಾದೆ, ಆದರೆ ಪೂರ್ತಿ ಟೈಪ್ ಮಾಡುವ ಮೊದಲೇ ಆಯ್ಕೆಗಳನ್ನುಕೊಡುವ ಈ Google ನ ಆತುರತೆ ನನ್ನನ್ನು ಮತ್ತೆ ಕಿರಿಕಿರಿಗೆ ತಳ್ಳತೊಡಗಿತು. ಸಣ್ಣದೊಂದು ತೀವ್ರತೆಯನ್ನೂ ತಡೆಯಲಾಗದಂತಹ ಸಮಯ, Laptop ಮುಚ್ಚಿಟ್ಟುಬಿಟ್ಟೆ.

ಸಣ್ಣದೊಂದು ದ್ವೇಷದ ನಿರೀಕ್ಷೆಯಲ್ಲಿದ್ದೆ ಅನ್ನಿಸುತಿತ್ತು, ಆದರೆ ಅದೊಂದು ಬಾರದ ಭಾವ, ಗೊತ್ತಿಲ್ಲದಂತೆಯೇ ಅನುಭವಿಸಿ, ನಂತರದ ಆ ತಲ್ಲಣಗಳೇ ಏನೋ, ನಾನು ಯಾರನ್ನೂ ವಯಕ್ತಿಕವಾಗಿ ದ್ವೇಷಿಸುವಂಥ ತಾಕತ್ತನ್ನೇ ಕಳೆದುಕೊಂಡುಬಿಟ್ಟೆ. ಅನುರಾಗದ ಆ Planned ಮೋಸಗಳು ದ್ವೇಷವನ್ನೂ, ದ್ವೇಷಿಸುವ ತಾಕತ್ತನ್ನು ತೊಡೆದುಹಾಕಿಬಿಡುತ್ತವಾ? ಗೊತ್ತಿಲ್ಲ.

Coffee Mug ತೆಗೆದಿಟ್ಟೆ, ರೂಮ್ ಫುಲ್ ಕೆದರಿದ ಹಾಗೆ ಭಾಸವಾಗುತ್ತಿತ್ತು. ಸುತ್ತಲೂ ಕಣ್ಣಾಡಿಸಿ ಒಂದು ಧೀರ್ಘವಾದ ನಿಟ್ಟುಸಿರು ಬಿಟ್ಟೆ. ಮತ್ತದೇ ಬೇಸರಿಕೆ, ಕನಸುಗಳೆಲ್ಲ ಕರಗಿ ಸುಮ್ಮನಾದ ಮೇಲೆ ಯಾವದಕ್ಕೂ ಉತ್ಸಾಹ ಇರುವುದಿಲ್ಲವೇನೋ? ಕಸ ಗೂಡಿಸಲೊಂದು Vacuum Cleaner, ಬಟ್ಟೆ ಒಗೆಯಲೊಂದು Washing Machine ಇರಬೇಕಿತ್ತು ಎನಿಸುತ್ತಿತ್ತು. ಭಾವನೆಗಲೆಲ್ಲವೂ ಬತ್ತಿ ಬರಿದಾದ ಮೇಲೆ ಉಳಿದುಕೊಂಡ ಸೋಮಾರಿತನದ ಪರಮಾವಧಿ ಇದು! ಇದಕೊಂದು ಕಾರಣವಿದೆ, ಮನೆಯಲ್ಲಿ ಎಲ್ಲಿಯೇ ನೋಡಿದರು ಅವಳ ನೆನಪುಗಳೊಂದಿಗೆ ಬೆರೆತುಕೊಳ್ಳುವ, ನೆನಪುಗಳನ್ನು ಮನಸ್ಸಿನಾಳದಿಂದ ತೆಗೆದು, ನನ್ನ ಮುಂದಿಡುವ ಪ್ರೇರಣೆಗಳೇ ಸಾವಿರ! ಯಾವದನ್ನೂ ಎದುರಿಸುವ ಧೈರ್ಯವಿಲ್ಲ. ಹಾಗೆಂದು ಅವುಗಳನೆಲ್ಲವನ್ನೂ ತೊರೆದು ಸಂಪಾದಿಸುವ ಆ ನಿರ್ಲಿಪ್ತತೆಯ ಅನಾವರಣವೂ ಬೇಡ. ಮನಸ್ಸು ಗೊಂದಲಗಳ ಗೂಡು!

ಪ್ರೀತಿಯೊಂದು ಸುಂದರ ಅನುಭವ ಅಂದುಕೊಂಡವನು ನಾನು. ಒಮ್ಮೆಯಾದರೂ ಹೀಗೆ ಸುಮ್ಮನೆ, ನನ್ನ ಜೀವನದಲ್ಲೊಮ್ಮೆ ಇದು ಬಂದು ಹೋಗಬಾರದಾ? ಅಂದುಕೊಳ್ಳುವ ಸಮಯದಲ್ಲಿ, ಸ್ವೇಚ್ಚೆಯಿಂದ ಬಂದ ಈ ಪ್ರೀತಿಗೆ ಇಸ್ಟೊಂದು ತೀವ್ರವಾಗಿ ಬಿಟ್ಟುಬಿಡಬೇಕು ಅನ್ನುವ ವಿಲಕ್ಷಣ ಆಸೆ ಬಂದದ್ದಾದರೂ ಯಾಕೆ? ಗೊತ್ತಿಲ್ಲ.

ಸುಮ್ಮನೆ ಹೊರಗೊಂದು Walk ಹೋಗಬೇಕು ಅನ್ನಿಸತೊಡಗಿತು, ಆ ನೆನಪುಗಳ ಜಗತ್ತಿನಿಂದಾಚೆಗೆ ಬರುವ ಪ್ರಯತ್ನದಲ್ಲಿದ್ದೆ, ಹಾಗೆಯೇ ಹೊರಟೆ, ನೆನಪುಗಳನ್ನು ಮರೆಸುವ ಪುಳಕಗಳ ಸಂಶೋಧನೆಯಲ್ಲಿ...